Tuesday, 29 April 2014

ಪಂಕ್ತಿ ಭೊಜನದ ಸುತ್ತಮುತ್ತ

ಉಡುಪಿಯಲ್ಲಿ ಊಟದ ಮಧ್ಯೆ ಬ್ರಾಹ್ಮಣಳಲ್ಲವೆಂಬ ಕಾರಣಕ್ಕೆ ಓರ್ವ ಮಹಿಳೆಯನ್ನು ಊಟದ ಪಂಕ್ತಿಯಿಂದ ಹೊರಹಾಕಿದ ಘಟನೆ ಬಹಳ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಆ ಘಟನೆಯನ್ನು ವಿಶ್ಲೇಶಿಸುವ ಸಂದರ್ಭದಲ್ಲಿ ಪರ ಹಾಗೂ ವಿರೋಧದ ಬಗ್ಗೆ ನಡೆದ ಚರ್ಚೆಗಳು ತೀರ ಬಾಲಿಶವಾಗಿಯೂ, ಅನುಚಿತವಾಗಿಯೂ ಇದ್ದಂತೆ ಕಂಡುಬಂದಿತು;ಒಂದು ರೀತಿಯಲ್ಲಿ ನಿಷ್ಪ್ರಯೋಜಕವೂ ಹೌದು. ಪರವಾಗಿ ವಾದಿಸಿದ ಬಹುತೇಕರು ಹೇಳಿದ್ದೇನೆಂದರೆ ಊಟ ಎನ್ನುವದು ಬ್ರಾಹ್ಮಣರಿಗೆ ಯಜ್ನ ಇದ್ದಂತೆ ಹಾಗೂ ಅನೇಕ ವಿಧಿ ವಿಧಾನಗಳನ್ನು ಅನುಸರಿಸಬೇಕಾದ್ದರಿಂದ ಬ್ರಾಹ್ಮಣರಿಗೆ ಬೇರೆಯದೆ ಪಂಕ್ತಿಭೋಜನ ಸರಿ ಎಂದು. ಇದನ್ನು ವಿರೋಧಿಸಿ ಹೇಳಿದವರಲ್ಲಿ ಇದೊಂದು ಅಮಾನವೀಯ, ಹಿಂದೂ ಧರ್ಮಕ್ಕೆ ತೊಡಕು, ಜಾತ್ಯಾತೀತವಲ್ಲ ಇತ್ಯಾದಿ ಹೇಳಿಕೆಗಳು. ಬಹುತೇಕವಾಗಿ ಎಲ್ಲರೂ ಜಾತ್ಯಾತೀತದ ಆಧಾರದ ಮೇಲೆ ಇದನ್ನು ವಿರೋದಿಸಿದ್ದಾರೆ. ಬ್ರಾಹ್ಮಣ, ಶೂದ್ರ ಇತ್ಯಾದಿಯಾಗಿ ಹೈಪೊಥೆಟಿಕಲ್ ಥಿಯರಿಯನ್ನು ಹೊಂದಿದ್ದವನಿಗೆ ಈ ಘಟನೆ ಹೊಸ ಫಾರ್ಮುಲಾದ ಅವಿಷ್ಕಾರವನ್ನು ನೀಡಿರಬಹುದು. ಇದಕ್ಕೂ ಮೀರಿದ ರೀತಿಯಲ್ಲಿ ಪಂಕ್ತಿಭೇದದ ಬಗ್ಗೆ ವಿವರಣೆಯನ್ನು ನೀಡಬಹುದಾದರೆ ನೈಜ್ಯತೆಯ ಬಗ್ಗೆ ಪರಿಶೀಲಿಸಲು ಅನುಕೂಲವಾಗಬಹುದು.
ಪಂಕ್ತಿಭೇದದ ಪರ ವಾದಿಸುವವರನ್ನು ತೆಗೆದುಕೊಂಡರೆ ಅವರ ಪ್ರಕಾರ ಬ್ರಾಹ್ಮಣರ ಊಟ ಎಂಬುದು ಯಜ್ನ. ಈ ವಿಧಿ ವಿಧಾನದ ಆಚರಣೆಗೋಸ್ಕರ ಪ್ರತ್ಯೇಕ ಪಂಕ್ತಿಭೋಜನದ ಅಗತ್ಯತೆಯನ್ನು ವಿವರಿಸುತ್ತಾರೆ. ಆದರೆ ಅದು ನಿಜವಾದಲ್ಲಿ, ಎಲ್ಲಾ ಬ್ರಾಹ್ಮಣರೂ ಎಲ್ಲಾ ಪ್ರದೇಶದಲ್ಲಿಯೂ, ಎಲ್ಲಾ ಸಂದರ್ಭದಲ್ಲಿಯೂ ಅಂತಹ ಆಚರಣೆಗಳನ್ನು ಅನುಸರಿಸಬೇಕಾಗಿತ್ತು. ಆದರೆ ಇಂತಹ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಬ್ರಾಹ್ಮಣರು ತೀರ ಅತ್ಯಲ್ಪ;ದೇವಾಲಯ, ಮಠಗಳಲ್ಲಿರುವ ಕೆಲವೇ ಮಂದಿ ಮಾತ್ರ. ಉಳಿದವರು ಕಟ್ಟುನಿಟ್ಟಾಗಿ ಆಚರಣೆಗಳನ್ನು ಪಾಲಿಸುವವರಲ್ಲ. ಎಷ್ಟೊ ಸಮಯದಲ್ಲಿ ಹೊಟೆಲ್ ಗಳಲ್ಲಿ ತಿನ್ನುವದು ಸಾಮಾನ್ಯವೆ. ಅಲ್ಲೆಲ್ಲಾ ಪಂಕ್ತಿಬೇದಗಳೂ ಲೆಕ್ಕಕ್ಕಿರುವದಿಲ್ಲ, ಅಡುಗೆ ಮಾಡಿದ ಜನರ ಕುಲ ಗೋತ್ರಗಳೂ ಲೆಕ್ಕಕ್ಕಿರುವದಿಲ್ಲ. ಊಟದ ಆಚರಣೆ/ಪದ್ದತಿಗಳೂ ಅನುಸರಿಸಲೇಬೇಕಾದ ಯಜ್ನವೆಂಬಂತೆ ಎಲ್ಲಾ ಬ್ರಾಹ್ಮಣರಿಗೆ ತೋರುವದೂ ಇಲ್ಲ. ಕೆಲವು ದಿವಸಗಳಲ್ಲಿ, ಕೆಲವು ಸಂದರ್ಭಗಳಲ್ಲಿ, ಕೆಲವು ಸ್ಥಳಗಳಲ್ಲಿ ಮಾತ್ರ ಆ ಸ್ಥಳದ ಸಂಪ್ರದಾಯ ಎಂಬಂತೆ ಪಾಲಿಸುತ್ತಾರೆ.  ಹಾಗಾಗಿ, ಉಡುಪಿ ಮಠದಲ್ಲಿನ ಪಂಕ್ತಿಭೇದ ಆ ಸ್ಥಳಕ್ಕೆ, ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವದೇ ಹೊರತು, ಬ್ರಾಹ್ಮಣ ಆಚರಣೆ/ವಿಧಿ ವಿಧಾನಗಳು, ಯಜ್ನ ಎಂಬೆಲ್ಲಾ ಕಾರಣ ಕೊಟ್ಟು ಸಮರ್ಥಿಸುವದು ಹಾಸ್ಯಾಸ್ಪದ.
ಇನ್ನು ಇದನ್ನು ವಿರೋಧಿಸುವವರಲ್ಲಿ ಬೇರೆ ಬೇರೆಯ ಗುಂಪಿಗೆ ಸೇರಲ್ಪಟ್ಟವರಿದ್ದಾರೆ. ಪ್ರೊಟೆಸ್ಟಂಟ್ -ಹಿಂದೂಗಳು, ರಾಜಕೀಯ ಹಿತಾಸಕ್ತರು, ಹಾಗೂ ಸಾಮಾಜಿಕ ಚಳುವಳಿಗಳಿಂದ, ಅಧ್ಯಯನಗಳಿಂದ ಪ್ರೇರೆಪಿತಗೊಂಡವರು. ಈ ಮೂರು ಗುಂಪುಗಳಲ್ಲಿ ನನಗೆ ಉತ್ತರಿಸಲೇಬೇಕಾದ ಅನಿವಾರ್ಯತೆ ಇದ್ದಂತೆ ತೋರುವದು ಪ್ರೊಟೆಸ್ಟಂಟ್ -ಹಿಂದೂಗಳಿಗೆ. ಈ ಬಗ್ಗೆ ಪ್ರೊಟೆಸ್ಟಂಟ್-ಹಿಂದುಗಳ ಕಾಳಜಿ, ಪ್ರಾಮಾಣಿಕತೆ ಅಭಿನಂದನೀಯ. ಅದರೆ ಇಂತಹ ಘಟನೆಯನ್ನು ಅವಲೋಕಿಸುವಲ್ಲಿ ಅವರ ಉತ್ಪ್ರೇಕ್ಷಣೀಯ ನಿಲುವು, ಅಸಹನೆ ಅನಗತ್ಯ ಅನಿಸುತ್ತದೆ. ಪ್ರೊಟೆಸ್ಟಂಟ್-ಹಿಂದುಗಳ ಪ್ರಕಾರ ಜಾತಿಗಳ ನಡುವಿನ ಈ ಕಂದಕ ಅವರ ಹಿಂದುಯಿಸ್ಮ್ ಗೆ ಮಾರಕ. ಹಾಗಾಗಿ ಪಂಕ್ತಿಭೇದವನ್ನು ಉಗ್ರವಾಗಿ ಖಂಡಿಸುವದು ಅವರ ಆದ್ಯತೆ. ಅವರ ಹಿಂದುಯಿಸ್ಮ್ ನ ಪರಿಕಲ್ಪನೆಯಲ್ಲಿ ಈ ನಿಲುವು ಸ್ವಾಗತಾರ್ಹ ಹೌದು. ಆದರೆ, ಈ ದಿಸೆಯಲ್ಲಿ ತಮ್ಮ ಕಲ್ಪನೆಯ ಹಿಂದುಯಿಸ್ಮ್ ನೊಳಗೆ ಉಡುಪಿ ಮಠ (ಅಥವಾ ಉಡುಪಿ ಮಠಗಳಂತಿರುವ ಉಳಿದ ಮಠಗಳನ್ನು) ಸೇರಿದೆ ಎಂದು ಊಹಿಸಿಕೊಂಡು, ತಮ್ಮದೇ ಹಿಂದುಯಿಸ್ಮ್ ನ ಆದರ್ಶಗಳನ್ನು ಅನಿರ್ಭಂದಿತವಾಗಿ(unconditionally) ಉಡುಪಿ ಮಠಗಳಂತ ಧಾರ್ಮಿಕ ಸಂಸ್ಥೆಗಳಿಂದ ಅಪೇಕ್ಷಿಸುತ್ತಿರುವದು ಅವರ ಅಸಹನೆಗೆ ಮೂಲ ಕಾರಣ. ಉದಾರಣೆಗೆ ಒಂದು ಹಳ್ಳಿ ಇದೆ ಅಂದುಕೊಳ್ಳಿ. ಆ ಹಳ್ಳಿಯ ಜನರು ಒಂದಿಲ್ಲೊಂದು ರೀತಿಯಿಂದ ಪರಸ್ಪರ ಅವಲಂಬನೆಯಿಂದಲೋ ಪರಸ್ಪರ ಹತ್ತಿರವಿದ್ದಿರುತ್ತಾರೆ. ಅವರವರೊಳಗೆ ಒಂದು ಅಲಿಖಿತ ನಾರ್ಮ್ ಬೆಳೆದುಬಂದಿರುತ್ತದೆ. ಹಾಗಿದ್ದಾಗ ಆ ಹಳ್ಳಿಯವನೊಬ್ಬ ಭಿನ್ನವಾದ ರೀತಿ ರಿವಾಜುಗಳನ್ನು ಬೆಳೆಸಿಕೊಂಡನೆಂದರೆ ಉಳಿದವರಿಗೆ ಅಸಹನೆಯಾಗತೊಡಗುತ್ತದೆ. ಆತ ತಮ್ಮಿಂದ ದೂರವಾಗುತ್ತಿದ್ದಾನೆ ಎಂಬುದೆ ಅವರ ಆತಂಕವಾಗುತ್ತದೆ. ಆತನೂ ಆ ಹಳ್ಳಿಯ ನೀತಿ ಸಂಹಿತೆಯ ಭಾಗವಾಗಿರಲೇಬೇಕು ಎನ್ನುವದು ಅವರ ಹಠವಾಗಿರುತ್ತದೆ. ಇಂತಹುದೆ ಮಾನಸಿಕ ಸನ್ನಿವೇಶ ಪ್ರೊಟೆಸ್ಟಂಟ್ -ಹಿಂದೂಗಳಲ್ಲಿ ಮೂಡಿದೆ. ಉಡುಪಿ ಮಠ ಹಾಗೂ ಇನ್ಯಾವುದೇ ಹಿಂದೂಗಳ ಅಂಗಗಳೆಂದು ಗುರುತಿಸಲ್ಪಡುವ ಸಂಸ್ಥೆಗಳು ಅವರ ಕಲ್ಪನೆಯ ಹಿಂದೂ ಧರ್ಮವನ್ನು ಪ್ರತಿನಿಧಿಸಲೆಬೇಕು ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ಹಾಗಿದ್ದಾಗ ಅಲ್ಲಿ ನಡೆಯುತ್ತಿರುವ ಪಂಕ್ತಿಬೇಧವಾಗಲೀ ಅಥವಾ ಅವರ ಬೇರಾವುದೇ ಅವರ ಹಿಂದುಯಿಸ್ಮ್ ಗೆ ವಿರುದ್ಧವೆನಿಸಿದ ಪದ್ದತಿಗಳು ಹಿಂದುಯಿಸ್ಮ್ ನಲ್ಲಿನ ಬಿರುಕು ಎಂದು ಭ್ರಮನಿರಸನಗೊಳ್ಳುತ್ತಾರೆ. ಅವರಿಗೆ ನಾನಿದಿಷ್ಟನ್ನೆ ಹೇಳಬಯಸುತ್ತೇನೆ. 'ನಿಮ್ಮ ಹಿಂದುಯಿಸ್ಮ್ ನ ಕಲ್ಪನೆಗೆ ಸ್ಪಷ್ಟವಾದ ರೂಪ ಕೊಡಿ. ಅದಕ್ಕೆ ಹೊರತಾದ ಪದ್ದತಿ ಆಚರಣೆಗಳನ್ನು ಅನುಸರಿಸುವ ಸಂಪ್ರದಾಯವಾದಿಗಳನ್ನು ಮಠ, ಸಂಸ್ಥೆಗಳನ್ನು ನಿಮ್ಮ ಲಿಸ್ಟ್ ನಿಂದ ಹೊರಹಾಕಿ. ಹೆಚ್ಚೆಂದರೆ ಅವರನ್ನು ಮನವೊಲಿಸಿ ನಿಮ್ಮ ಲಿಸ್ಟ್ ನೊಳಗೆ ಸೇರಿಸಿಕೊಳ್ಳಲು ನಿಮ್ಮದೆ ಮಿಶನ್ ನಡೆಸಿರಿ. ಅವರಿಗೆ ನಿಮ್ಮ ರಾಜಕೀಯ, ಸಾಮಾಜಿಕ ಅಗತ್ಯ ಇದ್ದರೆ ನಿಮ್ಮನ್ನು ಅನುಸರಿಸುತ್ತಾರೆ, ಇಲ್ಲದಿದ್ದಲ್ಲಿ ಬೇರೆಯಾಗುತ್ತಾರೆ. ಇನ್ನು ಆ ಮಠ ನ್ಯಾಯಯುತವಾಗಿ ಸಾರ್ವಜನಿಕ ಸ್ವತ್ತಾಗಿದ್ದರೆ, ಅದನ್ನು ಸಾರ್ವತ್ರೀಕರಣಗೊಳಿಸಲು ಕಾನೂನು ಹೋರಾಟ ಮಾಡಿ. ಅದರ ಬದಲು ಅಂತಹ ಮಠ, ಸಂಸ್ಥೆಗಳನ್ನು ನಿಮ್ಮ ಕಲ್ಪನೆಯ ಆದರ್ಷ ಹಿಂದುಯಿಸ್ಮ್ ನ ಭಾಗವಾಗಿ, ಅಥವಾ ವಾರಸುದಾರರಾಗಿ ನೋಡಲು ಬಯಸಿದರೆ ಅಂತಹ ನಿಮ್ಮ ಪ್ರಯತ್ನ ಹುರುಳಿಲ್ಲದ್ದು. ನಾಳೆ ಯಾವುದೋ ಒಂದು ದೇವಸ್ಥಾನದಲ್ಲಿ ತೀರ್ಥದ ಬದಲು ಕೋಕ್, ಪೆಪ್ಸಿ ಕೊಡಬಹುದು, ಪೂಜೆಯ ವಿಧಿ ವಿಧಾನವನ್ನು ನಿಮ್ಮ ಕಲ್ಪನೆಗೆ ವ್ಯತಿರಿಕ್ತವಾಗಿ ಆಚರಿಸಬಹುದು. ಆಗೆಲ್ಲ ಅದನ್ನು ವಿರೋಧಿಸಲು, ಚರ್ಚಿಸಲು, ನಿಮ್ಮ ದಂಡಿನೊಂದಿಗೆ ತೆರಳಬೇಕಾಗಬಹುದು. ನಿಮ್ಮ ಹಿಂದುತ್ವದ ಅಸ್ತಿತ್ವವನ್ನು ಉಡುಪಿ ಮಠದಲ್ಲಿಟ್ಟು ಅವರಿಂದ ನಿಮ್ಮ ಆದರ್ಷಗಳನ್ನು ನಿರೀಕ್ಷಿಸುವದು ಮೂರ್ಖತನ. ಅದು ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎನ್ನುವದನ್ನು ಸ್ಪಷ್ಟ ಪಡಿಸುತ್ತದೆ. ಹಾಗಾಗಬಾರದು. ಅವರು ನಿಮ್ಮ ಮೇಲೆ ಅವಲಂಬಿತರಾಗುವಂತೆ ಮಾಡಬೇಕೆ ಹೊರತೂ ನೀವು ಅವರ ಅವಲಂಬಿಗಳಾಗಕೂಡದು. ನಿಮ್ಮ ಹಿಂದೂ ನೀತಿ ಸಂಹಿತೆಯನ್ನು ನಿಮ್ಮ ಆದರ್ಷಗಳನ್ನು ಒಪ್ಪುವ ಅಂಗ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿರಿ. ನಿಮ್ಮ ನೀತಿ ಸಂಹಿತೆಗಳನ್ನು ಎಲ್ಲಾ ಹಿಂದೂ ಅಂಗ ಸಂಸ್ಥೆಗಳೂ ಒಪ್ಪಲೆಬೇಕೆನ್ನುವ ಮನಸ್ಥಿತಿಯೆ ನಿಮ್ಮ ಗೊಂದಲಗಳಿಗೆ ಕಾರಣ’.
ಇನ್ನು ಮಾನವೀಯ ಕಾರಣಗಳಿಗಾಗಿ ವಿರೋಧಿಸುವವರು ’ಮಾನವೀಯತೆ’ ಎಂಬುದರ ಬಗ್ಗೆ ಸ್ಪಷ್ಟ ವಿವರಣೆ ಹೊಂದಿರುವದಿಲ್ಲ. ಒಬ್ಬ ಸೆಕಂಡ್ ಕ್ಲಾಸ್ ನಲ್ಲಿ ಟಿಕೆಟ್ ತೆಗೆದುಕೊಂಡವನು ಬಾಲ್ಕನಿಗೆ ಹೋಗಿ ಕುಳಿತುಕೊಂಡರೆ ಆತನನ್ನು ಮಧ್ಯದಲ್ಲಿ ಎಬ್ಬಿಸಬಹುದು. ಆಗ ಅದು ನಮಗೆ ಅಮಾನವೀಯ ಎಂದೆನಿಸದೇ ಇರಬಹುದು. ಹಾಗೆ ಸಮಾಜದಲ್ಲಿನ ಎಷ್ಟೊ ಅಂತರಗಳಲ್ಲಿನ ಜೀವನಗಳನ್ನು ನಾವು ಕೆಲವೊಮ್ಮೆ ಒಪ್ಪಿಕೊಳ್ಳುತ್ತೇವೆ, ಕೆಲವೊಮ್ಮೆ ಅದು ಸಾಮಾನ್ಯ ಎಂದು ನಿರ್ಲಕ್ಷಿಸುತ್ತೇವೆ ಅಥವಾ ವಿರೋಧಿಸಲೂಬಹುದು. ಆಗೆಲ್ಲಾ ನಮ್ಮ ಜೀವನದ ಸಾಂಸ್ಕೃತಿಕ, ವೈಯಕ್ತಿಕ ಜೀವನದ ಹಿನ್ನೆಲೆಗಳು ಪೂರಕವಾಗಿರುತ್ತದೆ. ಅವು ನಮ್ಮಲ್ಲಿ ಒಂದು ಕಾನ್ಷಿಯಸ್ ನೆಸ್ ಅನ್ನು ಹುಟ್ಟುಹಾಕಿಬಿಡುತ್ತದೆ. ಒಬ್ಬಳು ಹುಡುಗಿ ಒಬ್ಬ ಹುಡುಗನನ್ನು ಕರಿಯ ಎಂಬ ಕಾರಣಕ್ಕೆ ಆತನನ್ನು ಮದುವೆಯಾಗಲು ನಿರಾಕರಿಸಿದರೆ ರೇಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣಾವಾದಿ ಹಿನ್ನೆಲೆಯಿಂದ ಬಂದಿರುವವನಿಗೆ ಇದೊಂದು ಅತಿ ಅಮಾನವೀಯ ಅನಿಸುತ್ತದೆ. ಒಂದು ವೇಳೆ ಆತ ಆರ್ಥಿಕವಾಗಿ ಪ್ರಬಲನಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರೆ ಕ್ಲಾಸ್ ಕಾನ್ಷಿಯಸ್ ನೆಸ್ ಇರುವ ಸುಧಾರಣವಾದಿಗೆ ಅದು ಅಮಾನವೀಯ ಎಂದೆನಿಸಬಹುದು. ಆತ ಓದಿಲ್ಲ, ಅಶಿಕ್ಷಿತ ಎಂಬ ಕಾರಣಕ್ಕೆ ನಿರಾಕರಿಸಿದರೆ ಅದು ಅವರಿಬ್ಬರಿಗೂ ರೀಸನೇಬಲ್ ಎನಿಸಬಹುದು. ಆದರೆ ಅಶಿಕ್ಷಿತ-ಸುಶಿಕ್ಷಿತ ಅಂತರದ ಸಮಾಜದಿಂದ ಒಬ್ಬ ಬೆಳೆದುಬಂದವನಿದ್ದರೆ, ಹಾಗೂ ಆತ ಅಶಿಕ್ಷಿತರ ಪರ ಹೋರಾಟ ನಡೆಸಿದ್ದರೆ, ಆತನಿಗೆ ಅಶಿಕ್ಷಿತ ಎಂಬ ನಿರಾಕರಣೆಯು ಅಮಾನವೀಯ ಎಂದು ಅಗತ್ಯವಾಗಿ ಎನಿಸುತ್ತದೆ. ನನ್ನ ಪರಿಚಯದೊಬ್ಬರ ಬ್ರಾಹ್ಮಣರ ಮನೆಯಲ್ಲಿ ಮನೆಯ ವಯಸ್ಸಾದವರೊಬ್ಬರು ಮರಣ ಹೊಂದಿದರು. ’ಸೂತಕ’ ಎನ್ನುವದನ್ನು ಅಲ್ಲಿನ ಬ್ರಾಹ್ಮಣರಷ್ಟೆ ಅಲ್ಲ, ಬ್ರಾಹ್ಮಣೆತರರೂ ನಂಬುತ್ತಾರೆ. ಬ್ರಾಹ್ಮಣೆತರಳಾದ ಅವರ ಮನೆಯ ಕೆಲಸದವಳು ಆ ಮನೆಯಲ್ಲಿ ೧೧ ದಿನಗಳ ತನಕ ನೀರನ್ನೂ ಕುಡಿಯಲಿಲ್ಲ. ಮನೆಯ ಜನರನ್ನು, ಬಟ್ಟೆಬರೆಗಳನ್ನು ಮುಟ್ಟಿಸಿಕೊಳ್ಳುವದಂತೂ ಸಾಧ್ಯವೇ ಇರಲಿಲ್ಲ. ನನಗೆ ಆಶ್ಚರ್ಯವಾಗಿ ಮನೆಯವರನ್ನು ಕೇಳಿದಾಗ ಅವರು ಉತ್ತರಿಸಿದರು. ಆ ಕೆಲಸದಾಕೆಯ ಜಾತಿಯವರು, ದೆವ್ವವನ್ನು ಬಹಳವಾಗಿ ನಂಬುತ್ತಾರಂತೆ. ಹಾಗಾಗಿ ಸೂತಕದ ದಿನಗಳಲ್ಲಿ ಕೆಲಸದವಳ ಪಾಲಿಗೆ ಇವರು ಬ್ರಾಹ್ಮಣರಾದಾಗ್ಯೂ ಅಸ್ಪೃಶ್ಯರೆ! ಇದನ್ನು ಆ ಮನೆಯವರು ಅಸ್ಪೃಶ್ಯತೆ, ಅಮಾನವೀಯ  ಎಂದು ಕಣ್ಣೀರಿಟ್ಟಿಲ್ಲ. ಯಾಕೆಂದರೆ ಇದನ್ನು ಸಂಸ್ಕೃತಿಯ ಭಾಗವೆಂಬಂತೆ ಅರ್ಥೈಸಿಕೊಳ್ಳುತ್ತಾರೆ. ಮೂರನೆಯವನಿಗೆ ಇದು ಅಮಾನವೀಯವಾಗಿ ಕಂಡರೆ ಅದು ಮಾನವೀಯತೆಯ ಬಗೆಗಿನ ಆತನ ಚಿಂತನೆಯ ಕೊರತೆ.
ಹಾಗಾಗಿ, ಹೀಗೆ ಬೇರೂರಿದ ಕಾನ್ಷಿಯಸ್ ನೆಸ್ ಹಾಗೂ ಅದು ಹುಟ್ಟುಹಾಕಿದ ಮೌಲ್ಯಗಳು ಆಯಾ ಪ್ರದೇಶ, ಸಂಸ್ಕೃತಿ, ಕಾಲಕ್ಕನುಸಾರವಾಗಿ ಬದಲಾವಣೆಯಾಗುತ್ತದೆ. ನಾವು ಆಯಾ ಸಂಸ್ಕೃತಿಗಳಲ್ಲಿ ಕಾಣಸಿಗದ ಕೆಲವು ಮೌಲ್ಯಗಳು ಸಾರ್ವತ್ರಿಕವಾಗಿರಲೇಬೇಕು ಎಂದು ಆಶಯಿಸಿದಾಗ ಇಂತಹ ಆಚರಣೆಗಳು, ಅಮಾನವೀಯ, ಭ್ರಷ್ಟ ಎಂಬ ನಿಲುವಿಗೆ ಬರುತ್ತೇವೆ. ಹಾಗಾಗಿ ಅದನ್ನು ’ಮಾನವೀಯ’ ನೆಲೆಗಟ್ಟಿನಲ್ಲಿ ತಪ್ಪು ಸರಿ ಎಂದು ನಿರ್ಣಯಿಸುವದು ಬಾಲಿಷತನ.
ಇನ್ನು ಮೂರನೆಯದಾಗಿ ಜಾತ್ಯಾತೀತದ ಬಗ್ಗೆ ಬಾಯಿಪಾಠ ಒಪ್ಪಿಸುವ ಕೆಲವು ಚಳುವಳಿ ಪ್ರೇರಿತ ಗುಂಪುಗಳಿವೆ. ಜಾತ್ಯಾತೀತತೆಯ ಬಗ್ಗೆ ತಮ್ಮ ಅಧ್ಯಯನಗಳ ಕೊರತೆಯನ್ನು ನೀಗಿಸಬೇಕಾದ ಪ್ರಾಮಾಣಿಕ ಪ್ರಯತ್ನವನ್ನು ಇವು ಮಾಡಬೇಕಾಗಿದೆ. ಊಹೆಗಳ ಆಧಾರದ ಮೇಲೆ ನಿಂತ ಇವರ ಅಧ್ಯಯನ, ಜಾತಿಗಳ ಸ್ಟೀರಿಯೋಟೈಪುಗಳನ್ನು ಹುಟ್ಟಿಹಾಕಿರುತ್ತದೆ. ಹಾಗಾಗಿ ಪುಸ್ತಕ ಪಠ್ಯದಲ್ಲಿ ಜಾಜಿಗಳ ಬಗ್ಗೆ ಓದಿದಾಗ ಹಾಗೂ ನಮ್ಮ ಸುತ್ತಮುತ್ತಲಿನ ಜಾತಿಗಳ ಬಗ್ಗೆ ನಮ್ಮ ಅನುಭವ ಒಂದೊಕ್ಕೊಂದು ತಾಳೆಯಾಗುವದೇ ಇಲ್ಲ. ಹಾಗಾಗಿ ಉಡುಪಿ ಮಠದ ಪಂಕ್ತಿ ಭೇದದ ಬಗೆಗಿನ ಇವರ ವಿವರಣೆ ನೈಜ್ಯತೆಗಿಂತ ಬಹಳ ದೂರ ಇರುವದಂತೂ ನಿಶ್ಚಿತ. ಇವುಗಳಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗನುಗುಣವಾಗಿ ಇವುಗಳ ಅಸ್ತಿತ್ವ ನಿಂತಿರುವದರಿಂದ ಇವರ ವಿರೋಧಗಳೂ ಸಹ ರಾಜಕೀಯ ಲಾಭವನ್ನೆ ಆಶ್ರಯಿಸಿದೆ. ಕೇವಲ ೨೦೦ ಮಂದಿಯೋ ೩೦೦ ಮಂದಿಯೊ ಆಚರಿಸುವ ಪಂಕ್ತಿ ಭೇದ ಲಕ್ಷಗಟ್ಟಲೆ ಬ್ರಾಹ್ಮಣೇತರ ಜನರನ್ನು ಅಸ್ಪೃಶ್ಯರನ್ನಾಗಿ ಮಾಡುತ್ತದೆ ಎನ್ನುವದಕ್ಕಿಂತ ಕಡಿಮೆ ಸಂಖ್ಯೆಯ ಬ್ರಾಹ್ಮಣರನ್ನೆ ಅಸ್ಪೃಶ್ಯರನ್ನಾಗಿ ಮಾಡಿಬಿಡಬಹುದು. ಹಾಗಿದ್ದಾಗ ಪಂಕ್ತಿಭೇದವನ್ನು ಬ್ರಾಹ್ಮಣೆತರರನ್ನು ತುಳಿಯುತ್ತದೆ, ಅಮಾನವೀಯ ಎನ್ನುವದು ತರ್ಕಕ್ಕೆ ನಿಲುಕುವದಿಲ್ಲ.
ಕೊನೆಯದಾಗಿ ಹೇಳಬೇಕೆಂದರೆ ಪಂಕ್ತಿ ಭೇದ ಎನ್ನುವದು ಸಮಸ್ಯೆಯೇ ಅಲ್ಲ. ಸಾಂಸ್ಕೃತಿಕ ವಲಯದಲ್ಲಿ ಹುಟ್ಟಿಕೊಂಡ ಗೊಂದಲಗಳಿಂದಾಗಿ ನಮಗೆ ಸಮಸ್ಯೆ ಎನಿಸಿದೆ. ಮಠ ಎನ್ನುವದು ಸಾರ್ವಜನಿಕರ ಆಸ್ತಿಯಾಗಿದ್ದರೆ ಕಾನೂನು ಹೋರಾಟ ಮಾಡಬಹುದು. ಹಾಗೆ ಕಾನೂನು ಹೋರಾಟ ಮಾಡುವಾಗ ಜಾತಿಯ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಖಾಸಗಿಯಾಗಿದ್ದರೆ, ಅವರ ಸಂಪ್ರದಾಯವನ್ನು ಅವರಿಗೇ ಬಿಟ್ಟು, ಅಲ್ಲಿಗೆ ಹೋಗದೆ ನಿರ್ಲಕ್ಷಿಸಬಹುದು. ಅದರಿಂದ ಕೆಲವೇ ಕೆಲವು ಜನರಿರುವ ಮಠಗಳು ಜನಮಾನ್ಯತೆಯನ್ನು ಕಳೆದುಕೊಳ್ಳಬಹುದೆ ಹೊರತೂ ಜನರು ಏನನ್ನೂ ಕಳೆದುಕೊಳ್ಳುವದಿಲ್ಲ.

Wednesday, 12 March 2014

ಖುರಾನ್ ನಲ್ಲಿ ಪುನರ್ಜನ್ಮದ ಉಲ್ಲೇಖ

ಮುಸ್ಲೀಮರು ಸ್ವಭಾವತಃ ಪುನರ್ಜನ್ಮದಲ್ಲಿ ನಂಬಿಕೆ ಇಡುವದಿಲ್ಲ. ಆಶ್ಚರ್ಯವೆಂದರೆ ಎಷ್ಟೊ ಖುರಾನ್ ನಲ್ಲಿನ ವಾಖ್ಯಗಳು ಪುನರ್ಜನ್ಮವನ್ನು ಸ್ಪಷ್ಟೀಕರಿಸುತ್ತವೆ. ಕೆಳಕಂಡ ಖುರಾನ್ ನ ವಿಷ್ಲೇಷಣೆಗಳನ್ನು ನೋಡೋಣ:
೧. [Quran 2:28] How can ye reject the faith in Allah?- seeing that ye were without life, and He gave you life; then will He cause you to die, and will again bring you to life; and again to Him will ye return.  
[ಅನುವಾದ: ಹೇಗೆ ನೀನು ಅಲ್ಲಾನ ನಂಬಿಕೆಯನ್ನು ನಿರಾಕರಿಸುತ್ತೀಯಾ? ಜೀವವಿಲ್ಲದ ನಿನಗೆ ಜೀವ ಕೊಟ್ಟವನು ಅಲ್ಲಾಹ್. ನೀನು ಸಾವನ್ನಪ್ಪುವದೂ ಆತನ ಕಾರಣದಿಂದಲೆ. ಸತ್ತ ನಂತರ ಮತ್ತೆ ನಿನಗೆ ಜೀವನ ಕೊಡುತ್ತಾನೆ, ನಂತರ ಅವನ ಬಳಿಗೆ ಮರಳಿ ಹೋಗುತ್ತೀಯಾ]
ಈ ಮೇಲೆ ಸ್ಪಷ್ಟವಾಗಿ ಸಾವು ಮರಣದ ಜೀವನ ಚಕ್ರವನ್ನು ಖುರಾನ್ ನಲ್ಲಿ ಉಲ್ಲೇಕಿಸಲಾಗಿದೆ.

೨. [Bukhari 4.54]The Prophet said..I would love to be martyred in Allah's Cause and then getresurrected and then get martyred, and then get resurrected again and then get martyred and then get resurrected again and then get martyred.
[ಅನುವಾದ: ಪ್ರೊಫೆಟ್ ಮೊಹಮ್ಮದರು ಹೇಳುತ್ತಾರೆ "ನಾನು ಅಲ್ಲಾಹನ ಕೃಪೆಗಾಗಿ ಪ್ರಾಣ ತ್ಯಜಿಸಲು ಇಷ್ಟಪಡುತ್ತೇನೆ. ಹಾಗೂ ಮತ್ತೆ ಬದುಕಿ ಬರಲು ಇಷ್ಟ ಪಡುತ್ತೇನೆ. ಮತ್ತೆ ಪ್ರಾಣ ತ್ಯಜಿಸುತ್ತೇನೆ, ಮತ್ತೆ ಅಲ್ಲಾಹನ ಕೃಪೆಯಿಂದ ಹುಟ್ಟಿಬರುತ್ತೇನೆ,ಮತ್ತೆ ಪ್ರಾಣ ತ್ಯಜಿಸುತ್ತೇನೆ"]
ಇಲ್ಲಿ ಸ್ವತಃ ಮೊಹಮ್ಮದರು ಮತ್ತೆ ಮತ್ತೆ ಹುಟ್ಟಿ ಬರುವ ವಿಚಾರವನ್ನು ಹೇಳುತ್ತಾರೆ.

೩. [Quran 10:24]The likeness of the lifeof the present is as the rain which We send down from the skies.
[Quran 18:45]
Set forth to them the similitude of the lifeof this world: It is like the rain which we send down from the skies: the earth's vegetation absorbs it, but soon it becomes dry stubble, which the winds do scatter: it is [only] Allah who prevails over all things.
[ಅನುವಾದ: ನಮ್ಮ ಜೀವನವು ಮಳೆಯಂತೆ ಮೇಲಿನಿಂದ ಕಳುಹಿಸಲ್ಪಟ್ಟದ್ದಾಗಿದೆ. ಗಿಡಗಳು ಮಳೆಯ ನೀರನ್ನು ಹೀರಿಕೊಳ್ಳುತ್ತವೆ. ಅನಂತರ ಒಣಗುತ್ತವೆ. ಒಣಗಲ್ಪಟ್ಟ ಗಿಡಗಳನ್ನು ಗಾಳಿಯು ಚದುರಿಸುತ್ತದೆ. ಅಲ್ಲಾಹನು ಎಲ್ಲಾ ವಸ್ತುಗಳಲ್ಲಿ ಅಡಗಿದ್ದಾನೆ]
ಈ ಮೇಲಿನ ವಾಖ್ಯದಲ್ಲಿ ಪುನರ್ಜನ್ಮದ ಬಗ್ಗೆ ಹೇಳದಿದ್ದರೂ ನಮ್ಮ ಜೀವನವನ್ನು ಮಳೆಯ ನೀರಿಗೆ ಹೋಲಿಸಲಾಗಿದೆ. ಮಳೆಯ ನೀರಿನಂತೆ ನಮ್ಮ ಜೀವವೂ ನಿರಂತರವಾಗಿ ಸಾವು ಬದುಕು ಚಕ್ರದಲ್ಲಿ ಸುತ್ತುವದನ್ನು ಖುರಾನ್ ಸ್ಪಷ್ಟವಾಗಿ ಹೇಳುತ್ತದೆ. ಇದನ್ನು ಮುಸಲ್ಮಾನರು ತಿರಸ್ಕರಿಸಿದರೆ ಖುರಾನ್ ನನ್ನು ತಿರಸ್ಕರಿಸಿದಂತೆಯೇ.
ಅಲ್ಲದೇ ಅಲ್ಲಾಹನು ಎಲ್ಲಾ ವಸ್ತುಗಳಲ್ಲಿ ಅಡಗಿದ್ದಾನೆ ಎಂಬಂತಹ ವಾಖ್ಯ ಮುಸಲ್ಮಾನರ ಇಂದಿನ ನಂಬಿಕೆಗಳಿಗಿಂತ ಭಿನ್ನವಾಗಿದೆ. ಇದನ್ನು ಮುಸಲ್ಮಾನರು ಅರ್ಥೈಸಿಕೊಳ್ಳಬೇಕಿದೆ.

೪. It is Allah Who causeththe seed-grain and the date-stone to split and sprout. He causeth the living tissue from the dead, and He is the one to cause the dead to issue from the living. That is Allah: then how are ye deluded away from the truth? Quran [6:95]
[ಅನುವಾದ:Quran [6:95]: ಅಲ್ಲಾಹನು ಧಾನ್ಯ-ಬೀಜದ ಉದಯಕ್ಕೆ ಕಾರಣನು. ಆತನೆ ಜೀವಕೋಶಗಳನ್ನು ಸತ್ತವುಗಳಿಂದ ಸೃಷ್ಟಿಸಿದ್ದೂ ಆತನೆ. ಜೀವಗಳನ್ನು ಸಾಯುವಂತೆ ಮಾಡಿದ್ದೂ ಆತನೆ.ಆತನೆ ಅಲ್ಲಾಹು. ಈ ಸತ್ಯವನ್ನು ಯಾಕೆ ನೀನು ಅಪಾರ್ಥ ಮಾಡಿಕೊಳ್ಳುವೆ?

೫. And who is it that brings out the living from the dead and the dead from theliving? [Quran 10:31]
[ಅನುವಾದ: Quran 10:31: ಸತ್ತವುಗಳಿಗೆ ಜೀವ ನೀಡಿದ್ದು ಯಾರು? ಬದುಕಿರುವವರಿಗೆ ಮರಣ ನೀಡುವವನು ಯಾರು?]

೬. It is He Who brings out the living from the dead, and brings out the dead from theliving, and Who gives life to the earth after it is dead: and thus shall ye bebrought out [from the dead]. [Quran 30:19]
[ಅನುವಾದ: Quran 30:19: ಸತ್ತವುಗಳಿಗೆ ಜೀವ ನೀಡಿದವನು ಅವನೆ. ಜೀವಗಳಿಗೆ ಮರಣ ದೊರಕಿಸುವವನೂ ಅವನೇ. ಸತ್ತ ನಂತರ ಭೂಮಿಯ ಮೇಲೆ ಜೀವ ಕೊಡುವವನೂ ಅವನೇ. ಆದ್ದರಿಂದ ನೀನು ಬದುಕಿದ್ದೀಯೆ]

೭. "Thou causest the night to gain on the day, and thou causest the day to gain on the night; Thou bringest the Living out of the dead, and Thou bringest the dead outof the Living; and Thou givest sustenance to whom Thou pleasest, without measure." [Quran 3:27]

[ಅನುವಾದ: Quran 3:27: ರಾತ್ರಿಯನ್ನು ಹಗಲಾಗುವಂತೆ ಮಾಡುವವನು ನೀನು. ಹಗಲನ್ನು ರಾತ್ರಿಯನ್ನಾಗಿ ಮಾಡುವವನು ನೀನು. ಸತ್ತವುಗಳಿಗೆ ಜೀವತುಂಬಿದ್ದು ನೀನು, ಜೀವಗಳಿಗೆ ಮರಣ ದೊರಕಿಸುವದು ನೀನು. ಎಲ್ಲವುಗಳು ಉಳಿಯಲು ನೀನೆ ಕಾರಣ. ನೀನು ಅಪಾರ ಆನಂದದಾಯಕ]

೮. [Quran 75:40]Has not He, [the same],the power to give life to the dead?
[ಅನುವಾದ: Quran 75:40: ಅವನಲ್ಲದಿದ್ದರೆ ಯಾರು ತಾನೆ ಸತ್ತವುಗಳಿಗೆ ಜೀವವನ್ನು ಕೊಡಬಲ್ಲರು?]

ಈ ಮೇಲಿನ ಎಲ್ಲಾ ಖುರಾನ್ ವ್ಯಾಖ್ಯೆಗಳೂ ಪುನರ್ಜನ್ಮವನ್ನು ಸ್ಪಷ್ಟಪಡಿಸುತ್ತವೆ. ಈಗ ಹೇಳಿ ಯಾಕೆ ಮುಸ್ಲೀಮರು ಖುರಾನ್ ನನ್ನು ಅಲ್ಲಾಹನ ಮಾತನ್ನು ತಪ್ಪಾಗಿ ಅರ್ಥೈಸಿದ್ದಾರೆ?